ಆತ್ಮೀಯರೇ,
ವಂದೇ ಗೋ ಮಾತರಂ.
೩೦ನೇ ಸಪ್ಟೆಂಬರ್ ೨೦೦೯ರಿಂದ ಆರಂಭಿಸಿ ೧೦೮ ದಿನಗಳ ಕಾಲ ’ವಿಶ್ವ ಮಂಗಲ ಗೋ ಗ್ರಾಮ ಯಾತ್ರೆ’ ನಡೆಯಲಿದೆ. ಯಾತ್ರೆ ಗೋ, ಗ್ರಾಮಗಳ ಪುನಶ್ಚೇತನ ಹಾಗೂ ಅಂತಿಮವಾಗಿ ವಿಶ್ವದ ಮಂಗಳವನ್ನು ತನ್ನ ಆಸೆ, ಆಶಯವಾಗಿ ಹೊತ್ತು ಹೊರಡುತ್ತಿದೆ. ಈ ಯಾತ್ರೆ ಭಾರತದ ಗಿರಿ-ಕಂದರಗಳ ಮೂಲಕ ಸಾಗಿ, ನದಿ-ಸರೋವರಗಳ ಮೇಲೆ ಪಯಣಿಸಿ, ಗ್ರಾಮ-ನಗರಗಳನ್ನು ಪ್ರವೇಶಿಸಿ ಎಲ್ಲರಲ್ಲೂ ಉದಾತ್ತ ಭಾವವನ್ನು ಮೊಳೆಸುವ ಉದ್ದೇಶವನ್ನು ತನ್ನದಾಗಿಸಿಕೊಂಡಿದೆ.
ಇದಕ್ಕಾಗಿ ಭಾರತದ ಎಲ್ಲ ಬಗೆಯ ಗೋ ಪ್ರೇಮಿಗಳೂ ಒಂದೇ ಛತ್ರದಡಿ ಸೇರುತ್ತಿರುವುದು ಹೇಳಲೇಬೇಕಾದ [...]